• ಮುಖ್ಯ ಅಭಿಯಂತರರು ತಾಂತ್ರಿಕ ಶಾಖೆಯ ಮುಖ್ಯಸ್ಥರಾಗಿರುತ್ತಾರೆ.

• ರಾಜ್ಯದ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಕೈಗೊಳ್ಳುವ ಕಾಮಗಾರಿಗಳ ಮೇಲುಸ್ತುವಾರಿ, ಅಂದಾಜು ಪಟ್ಟಿಗಳಿಗೆ ತಾಂತ್ರಿಕ ಮಂಜೂರಾತಿ ನೀಡುವುದು ಹಾಗೂ ಆಡಳಿತಾತ್ಮಕ ಅನುಮೋದನೆಗಾಗಿ ಕಡತಗಳನ್ನು ನಿರ್ದೇಶಕರಿಗೆ ಸಲ್ಲಿಸುವುದು. ತಾಂತ್ರಿಕ ಶಾಖೆಯ ಕೆಲಸಗಳ ಮೇಲುಸ್ತುವಾರಿ ಹಾಗೂ ನಿರ್ದೇಶಕರು ಕಾಲಕಾಲಕ್ಕೆ ನೀಡುವ ಆದೇಶಗಳನ್ನು ಪಾಲಿಸುವುದು.

• ಆಯಾ ಜಿಲ್ಲಾಧಿಕಾರಿಗಳಿಂದ ಸ್ವೀಕೃತವಾಗುವ ನಗರ ಸ್ಥಳೀಯ ಸಂಸ್ಥೆಗಳ ನಗರೋತ್ಥಾನ ಯೋಜನೆಯ ಅಭಿವೃದ್ಧಿಗೆ ಸಂಬAಧಿಸಿದ ಪ್ರಸ್ತಾವನೆಗಳನ್ನು ಸರ್ಕಾರದಿಂದ ಕಾಲ ಕಾಲಕ್ಕೆ ಹೊರಡಿಸುವ ಮಾರ್ಗಸೂಚಿಗಳನ್ವಯ ಹಾಗೂ ಸುತ್ತೋಲೆಗಳನ್ವಯ ಪರಿಶೀಲಿಸುವುದು.

• ನಗರ ಸ್ಥಳೀಯ ಸಂಸ್ಥೆಗಳಿಂದ ಅನುದಾನ ಬಿಡುಗಡೆಗಾಗಿ, ಮಂಜೂರಾತಿ ಹಾಗೂ ಅನುಮೋದನೆಗಾಗಿ ಎಲ್ಲಾ ಪ್ರಸ್ತಾವನೆಗಳು ಆಯಾ ಜಿಲ್ಲಾಧಿಕಾರಿಗಳಿಂದ ಸ್ವೀಕೃತವಾಗುತ್ತವೆ.

• ಪ್ರತಿಯೊಂದು ಪ್ರಸ್ತಾವನೆಗಳನ್ನು ಸಹಾಯಕ ಅಭಿಯಂತರರು ಹಾಗೂ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು ಪರಿಶೀಲಿಸಿ, ಅಧೀಕ್ಷಕ ಅಭಿಯಂತರರ ಮುಖಾಂತರ ಮುಖ್ಯ ಅಭಿಯಂತರರಿಗೆ ಸಲ್ಲಿಸುತ್ತಾರೆ. ತದನಂತರ ಮುಖ್ಯ ಅಭಿಯಂತರರು ಕೂಲಂಕುಷವಾಗಿ ಪರಿಶೀಲಿಸಿ ಅನುಮೋದನೆಗಾಗಿ ನಿರ್ದೇಶಕರಿಗೆ ಸಲ್ಲಿಸುತ್ತಾರೆ.

• ನಿರ್ದೇಶಕರಿಂದ ಅನುಮೋದಿಸಲ್ಪಟ್ಟ ಪ್ರಸ್ತಾವನೆಗಳನ್ನು ಸಂಬಂಧಪಟ್ಟವರಿಗೆ ಅಂಚೆ ಮೂಲಕ/ಮಿಂಚಂಚೆ ಮೂಲಕ ಕಳುಹಿಸಲಾಗುವುದು. ಮುಖ್ಯ ಅಭಿಯಂತರರು ತಮ್ಮ ಅಧೀನದಲ್ಲಿ ಬರುವ ಅಧಿಕಾರಿ/ ಸಿಬ್ಬಂದಿಗಳ ಕಾರ್ಯವೈಖರಿಗಳ ಬಗ್ಗೆ ಮೇಲುಸ್ತುವಾರಿ ವಹಿಸುತ್ತಾರೆ.

ಮೂಲ : ಪೌರಾಡಳಿತ ನಿರ್ದೇಶನಾಲಯ , ಕರ್ನಾಟಕ ಸರ್ಕಾರ.