ಮುನಿಸಿಪಲ್ ಕೌನ್ಸಿಲುಗಳ ನಿರ್ಬಂಧಕ ಮತ್ತು ವಿವೇಚನಾತ್ಮಕ ಪ್ರಕಾರ್ಯಗಳು

ಮುನಿಸಿಪಲ್ ಕೌನ್ಸಿಲುಗಳ ನಿರ್ಬಂಧಕ ಪ್ರಕಾರ್ಯಗಳು - ಪ್ರತಿಯೊಂದು ಮುನಿಸಿಪಲ್ ಕೌನ್ಸಿಲಿಗೆ [ ಪೌರಸಭಾ ಪ್ರದೇಶ] ದೊಳಗೆ ಕೆಳಕಂಡ ವಿಷಯಗಳ ಪ್ರತಿಯೊಂದಕ್ಕಾಗಿ, ಅದು ಕಾನೂನು ಬದ್ಧವಾಗಿ ಉಪಯೋಗಿಸಬಹುದಾದ ಅಥವಾ ತೆಗೆದುಕೊಳ್ಳಬಹುದಾದಂಥ ಯಾವುದೇ ಸಾಧನಗಳು ಅಥವಾ ಸಂಪನ್ಮೂಲಗಳ ಮೂಲಕ ಸಾಕಷ್ಟು ವ್ಯವಸ್ಥೆ ಮಾಡುವುದು ಕರ್ತವ್ಯವಾಗಿರುತ್ತದೆ.

(ಎ) ಸಾರ್ವಜನಿಕ ಬೀದಿಗಳು, ಸ್ಥಳಗಳು ಮತ್ತು ಕಟ್ಟಡಗಳಿಗೆ ದೀಪದ ವ್ಯವಸ್ಥೆ.

(ಬಿ) ಸಾರ್ವಜನಿಕ ಬೀದಿಗಳು ಮತ್ತು ಸ್ಥಳಗಳಿಗೆ ನೀರು ಹಾಕುವುದು.

(ಸಿ) ಖಾಸಗಿ ಸ್ವತ್ತಲ್ಲದ, ಸಾರ್ವಜನಿಕ ಅನುಭೋಗಕ್ಕೆ ಮುಕ್ತವಾಗಿರುವ ಅಂಥ ಜಾಗಗಳು ಮುನಿಸಿಪಲ್ ಕೌನ್ಸಿಲಿನಲ್ಲಿ ನಿಹಿತವಾಗಿರಲಿ ಅಥವಾ ಇಲ್ಲದಿರಲಿ ಅಂಥ ಸಾರ್ವಜನಿಕ ಬೀದಿಗಳು, ಸ್ಥಳಗಳು ಮತ್ತು ಗ್ರಾಮಸಾರ ಚರಂಡಿಗಳನ್ನು ಸ್ವಚ್ಛಗೊಳಿಸುವುದು, ಹಾನಿಕಾರಕ ಸಸ್ಯಗಳನ್ನು ತೆಗೆದುಹಾಕುವುದು ಮತ್ತು ಎಲ್ಲಾ ಸಾರ್ವಜನಿಕ ಉಪದ್ರವಗಳನ್ನು ಉಪಶಮನಗೊಳಿಸುವುದು.

(ಡಿ) ಬೆಂಕಿ ಸಂಭವಿಸಿದಾಗ ಬೆಂಕಿಯನ್ನು ಆರಿಸುವುದು, ಪ್ರಾಣ ಮತ್ತು ಸ್ವತ್ತನ್ನು ಸಂರಕ್ಷಿಸುವುದು.

(ಇ) ಅಸಹ್ಯಕರ ಅಥವಾ ಅಪಾಯಕಾರಿ ವೃತ್ತಿಗಳು ಮತ್ತು ಆಚರಣೆಗಳನ್ನು ನಿಯಂತ್ರಿಸುವುದು ಅಥವಾ ಉಪಶಮನಗೊಳಿಸುವುದು.

(ಎಫ್) ಸಾರ್ವಜನಿಕ ಬೀದಿಗಳು, ಸೇತುವೆಗಳು ಮತ್ತು ಇತರ ಸಾರ್ವಜನಿಕ ಸ್ಥಳಗಳು ಮತ್ತು ಖಾಸಗಿ ಸ್ವತ್ತಲ್ಲದ ಸಾರ್ವಜನಿಕ ಅನುಭೊಗಕ್ಕೆ ಮುಕ್ತವಾಗಿರುವಂಥ ಜಾಗಗಳಲ್ಲಿ ಅಂಥ ಜಾಗಗಳು ಮುನಿಸಿಪಲ್ ಕೌನ್ಸಿಲಿನಲ್ಲಿ ನಿಹಿತವಾಗಿರಲಿ ಅಥವಾ ಸರ್ಕಾರಕ್ಕೆ ಸೇರಿರಲಿ ಅವುಗಳಲ್ಲಿಯ ಅಡಚಣೆಗಳನ್ನು ಮತ್ತು ಮುಂಚಾಚುಗಳನ್ನು ತೆಗೆದುಹಾಕುವುದು.

(ಜಿ) ಅಪಾಯಕಾರಿ ಕಟ್ಟಡಗಳು ಅಥವಾ ಸ್ಥಳಗಳನ್ನು ಭದ್ರಪಡಿಸುವುದು ಅಥವಾ ತೆಗೆದುಹಾಕುವುದು ಮತ್ತು ಅನಾರೋಗ್ಯಕರ ಸ್ಥಳಗಳನ್ನು ಹಸನುಗೊಳಿಸುವುದು.

(ಎಚ್) ಮೃತರ ವಿಲೆಗಾಗಿ ಸ್ಥಳಗಳನ್ನು ಅರ್ಜಿಸುವುದು ಮತ್ತು ನಿರ್ಹಿಸುವುದು, ಬದಲಾಯಿಸುವುದು ಮತ್ತು ನಿಯಂತ್ರಿಸುವುದು.

(ಐ) ಸಾರ್ವಜನಿಕ ಬೀದಿಗಳು, ಅಡಿಗಾಲುವೆ, ಪೌರಸಭೆ ಸರಹದ್ದು ಗುರುತುಗಳು, ಮಾರುಕಟ್ಟೆಗಳು [ತರಕಾರಿಗಳ ಮಾರಾಟಕ್ಕಾಗಿನ ಪ್ರತ್ಯೇಕ ಮತ್ತು ಸೂಕ್ತ ಸ್ಥಳವನ್ನು ಒಳಗೊಂಡು], ಕಸಾಯಿಖಾನೆಗಳು, ಕಕ್ಕಸುಗಳು, ಮೂತ್ರಗಳು, ಚರಂಡಿಗಳು, ಗ್ರಾಮಸಾರ ಚರಂಡಿಗಳು, ಚರಂಡಿ ವ್ಯವಸ್ಥೆ ಕಾಮಗಾರಿಗಳು, ಗ್ರಾಮಸಾರ ಕಾರಂಜಿಗಳು, ಕೆರೆಗಳು, ಬಾವಿಗಳು, ಅಣೆಕಟ್ಟುಗಳು ಮತ್ತು ಅಂಥವುಗಳನ್ನು ನಿರ್ಮಿಸುವುದು, ಬದಲಾಯಿಸುವುದು ಮತ್ತು ನಿರ್ವಹಿಸುವುದು.

(ಜೆ) ಈಗಿರುವ ಸರಬರಾಜು ಸಾಕಷ್ಟಿಲ್ಲದಿರುವುದು ಅಥವಾ ಅನಾರೋಗ್ಯಕರವಾಗಿರುವುದರಿಂದಾಗಿ ನಿವಾಸಿಗಳ ಆರೋಗ್ಯಕ್ಕೆ ಅಪಾಯವನ್ನು ತಡೆಗಟ್ಟುವುದಕ್ಕಾಗಿ ಅಂಥ ಸರಬರಾಜು ಅಥವಾ ಹೆಚ್ಚಿನ ಸರಬರಾಜನ್ನು ಯುಕ್ತ ಖರ್ಚಿನಲ್ಲಿ ಪಡೆದುಕೊಳ್ಳಬಹುದಾಗಿರುವಾಗ, ಅಥವಾ ಸರಿಯಾದ ಮತ್ತು ಸಾಕಷ್ಠಾದ ನೀರಿನ ಸರಬರಾಜು ಅಥವಾ ಹೆಚ್ಚಿನ ಸರಬಾರಜನ್ನು ಪಡೆಯುವುದು.

(ಕೆ) ಬೀದಿಗಳಿಗೆ ಹೆಸರಿಡುವುದು ಮತ್ತು ಮನೆಗಳಿಗೆ ಸಂಖ್ಯೆಯನ್ನು ಕೊಡುವುದು.

(ಎಲ್) ಜನನಗಳು ಮತ್ತು ಮರಣಗಳನ್ನು ನೋಮದಾಯಿಸುವುದು.

(ಎಮ್) ಸಾರ್ವಜನಿಕ ದೇವಿ ಹಾಕುವುದು.

(ಎನ್) ಪ್ರಾಣಿಗಳ ಲಸಿಕೆಯ ಸರಬರಾಜಿಗಾಗಿ [ಪೌರಸಭಾ ಪ್ರದೇಶಗಳಿಗೆ ಅಗತ್ಯವಾದ ಕರುಗಳು, ಹಸುಗಳು ಅಥವಾ ಎಮ್ಮೆಗಳಿಗೆ ಸೂಕ್ತ ಸ್ಥಲಾವಕಾಶವನ್ನು ಒದಗಿಸುವುದು.

(ಓ) ಪ್ರಾಥಮಿಕ ಪೂರ್ವ ಶಿಕ್ಷಣಕ್ಕಾಗಿ ಶಾಲೆಗಳನ್ನು ಇಟ್ಟುಕೊಂಡು ಬರುವುದು.

(ಕ್ಯೂ) ನಾಯಿ ಹುಚ್ಚಿನ ವಿರುದ್ಧ ಚಿಕಿತ್ಸೆ ಮತ್ತು ಕುಷ್ಟ ರೋಗಿಗಳು ಮತ್ತು ಮಾನಸಿಕ ರೋಗಿಗಳ ಚಿಕಿತ್ಸೆಗಾಗಿ ಸೌಲಭ್ಯಗಳನ್ನು ಒದಗಿಸುವುದು ಮತ್ತು ಪೌರಸಭೆಯ ಪರಿವಾಸಿಗಳೊಳಗೆ ಅಥವಾ ಹೊರಗೆ ನಾಯಿ ಹುಚ್ಚಿನ ವಿ ರುದ್ಧ ಚಿಕಿತ್ಸೆ ಪಡೆಯುತ್ತಿರುವ ನಿರ್ಧನಿಕ ವ್ಯಕ್ತಿಗಳ ವೆಚ್ಚಗಳನ್ನು ಭರಿಸುವುದು.

(ಆರ್) ಮಲ ಮತ್ತು ಕಸವನ್ನು ತೆಗೆಯುವುದ್ಕಕಾಗಿ ಮತ್ತು ಮಲ ಮತ್ತು ಕಸವನ್ನು ವಿಲೆ ಮಾಡುವುದಕ್ಕಾಗಿ ಮುನ್ಸಿಪಲ್ ಕೌನ್ಸಿಲ್ ನಿಯೋಜಿಸಿದ ನೌಕರರ ುಪಯೋಗಕ್ಕಾಗಿ ಮುಚ್ಚಿದ ಲೋಹದ ಸಂಪುಟಗಳನ್ನು ಚಕ್ರಗಳ ಮೇಲೆ ಕೂಡ್ರಿಸಿರುವ ಮುಚ್ಚಿದ ಲೋಹದ ಸಂಪುಟಗಳನ್ನು ಒದಗಿಸುವುದು ಮತ್ತುಸರ್ಕಾರವು ಹಾಗೆ ಅಗತ್ಯಪಡಿಸಿದರೆ, ಅಂಥ ಮಲ ಮತ್ತು ಕಸದಿಂದ ಕಂಪೋಸ್ಟ್ ಗೊಬ್ಬರವನ್ನು ತಯಾರಿಸುವುದು. ವಿವರಣೆ:- ಈ ಖಂಡದಲ್ಲಿ ‘ಕಸ’ ಎಂಬುದರಲ್ಲಿ ಧೂಳು, ಬೂದಿ, ಒಡೆದ ಿಟ್ಟಿಗೆಗಳು, ಗಾರೆ, ಗ್ರಾಮಸಾರ, ಸಗಣಿ, ಕೊಳೆ ಯಾವುದೇ ಬಗೆಯ [ಕೊಳೆತ] ವಸ್ತುಗಳು ಮತ್ತು ಹೊಸಲು ಒಳಗೊಳ್ಳುತ್ತದೆ.

(ಎಸ್) ಪೌರಸಭೆಯ ಕಸಗುಡಿಸುವವರು ಮತ್ತು ಜಾಡಮಾಲಿಗಳಿಗೆ ಸ್ಥಳಾವಕಾಶವನ್ನು ಒದಗಿಸುವುದು ಮತ್ತುಈ ಬಗ್ಗೆ ನಿಯಮಿಸಿದ ನಿಯಮಗಳಗೊಳಪಟ್ಟು ಅಂಥ ಕಸಗುಡಿಸುವವರು ಮತ್ತು ಜಾಡಮಾಲಿಗಳಿಗೆ ಮನೆಗಳ ನಿರ್ಮಾಣಕ್ಕಾಗಿ ಸಾಲಗಳನ್ನು ಕೊಡುವುದು.

(ಟಿ) ಸರ್ಕಾರವು ಸಾಮಾನ್ಯ ಅಥವಾ ವಿಶೇಷ ಆದೇಶಗಳ ಮೂಲಕ ಮುನ್ಸಿಪಲ್ ಕೌನ್ಸಿಲ್ ಒಪ್ಪಿಸಬೇಕೆಂದು ಅಗತ್ಯಪಡಿಸುವಂಥ [ಪೌರಸಭಾ ಪ್ರದೇಶ]ದ ಪೌರಾಡಳಿತದ ಮೇಲೆ ವಾರ್ಷಿಕ ವರದಿಗಳನ್ನು ಮುದ್ರಿಸುವುದು.

(ಯು) ಈ ಅಧಿನಿಯಮದ ಉದ್ದೇಶ್ಕಕಾಗಿ ಅಥವಾ ಯಾವುದೇ ಪೌರಸಭೆಯ ಸ್ವತ್ತಿನ ಸಂರಕ್ಷಕಣೆಗಾಗಿ ಮುನ್ಸಿಪಲ್ ಕೌನ್ಸಿಲಿಗ ಬೇಕಾಗಬಹುದಾದಂಥ ಪೊಲೀಸ್ ಅಥವಾ ರಕ್ಷಕರುಗಳಿಗಾಗಿ ವೇತನ ಮತ್ತು ಸಾದಿಲ್ವಾರು ವೆಚ್ಚವನ್ನು ಸಂದಾಯ ಮಾಡುವುದು ಮತ್ತು ಪೊಲೀಸರಿಗೆ ಸಂಬಂಧಪಟ್ಟಂತೆ ಜಾರಿಯಲ್ಲಿರುವ ಕಾನೂನಿನ ಮೇರೆಗೆ ಸರ್ಆಕರವು ಅಗತ್ಯಪಡಿಸಬಹುದಾದಂಥ ಸ್ಥಳಾವಕಾಶವನ್ನು ಒದಗಿಸುವುದು.

ವಿವರಣೆ: [ಪೌರಸಭಾ ಪ್ರದೇಶ] ದೊಳಗಿನ ಎಲ್ಲಾ ಕಟ್ಟಡಗಳು ಮತ್ತು ನಿವೇಶನಗಳ ತಹಲ್ ವರೆಗಿನ ದಾಖಲೆಯನ್ನು ಇಡುವುದು.

ವಿಶೇಷ ಕಾರ್ಯಗಳು: - 87ನೇ ಪ್ರಕರಣದಲ್ಲಿ ನಮೂದಿಸಲಾದಂಥ ಯುಕ್ತ ಮತ್ತು ಸಾಕಷ್ಟು ುಪಬಂಧ ಮಾಡುವುದಕ್ಕೆ ೊಳಪಟ್ಟು, ಪ್ರತಿಯೊಂದು ಮುನ್ಸಿಪಲ್ ಕೌನ್ಸಿಲ್ ಈ ಕೆಳಕಂಡ ವಿಶೇಷ ವಿಷಯಗಳಿಗಾಗಿ ಯುಕ್ತ ೇರ್ಪಾಡನ್ನು ಮಾಡತಕ್ಕದ್ದು ಎಂದರೆ –

(ಕ) ಅಪಾಯಕಾರಿ ರೋಗದ ಕಾಲದಲ್ಲಿ ರೋಗಿಗಳಿಗಾಗಿ ವಿಶೇಷ ವೈದ್ಯಕೀಯ ನೆರವು ಮತ್ತು ಸ್ಥಳಾವಕಾಶವನ್ನು ಒದಗಿಸುವುದು ಮತ್ತು ರೋಗ ಹರಡುವುದನ್ನು ತಡೆಗಟ್ಟಲು ಮತ್ತು ರೋಗ ಮರುಕಳಿಸುವುದನ್ನು ದಮನಗೊಳಿಸಲು ಮತ್ತು ತಡೆಗಟ್ಟಲು ಅಗತ್ಯವಾಗಬಹುದಾದಂಥ ಕ್ರಮಗಳನ್ನು ತೆಗೆದುಕೊಳ್ಳುವುದು.

(ಖ) [ಪೌರಸಭಾ ಪ್ರದೇಶ]ದ ಪರಿಮಿತಿಯೊಳಗೆ ನಿರ್ಗತಿಕ ವ್ಯಕ್ತಿಗಳಿಗಾಗಿ ಕ್ಷಾಮ ಅಥವಾ ಅಭಾವದ ಕಾಲಗಳಲ್ಲಿ ಪರಿಹಾರ ಕೊಡುವುದು ಮತ್ತು ಪರಿಹಾರ ಕಾಮಗಾರಿಗಳನ್ನು ಸ್ಥಾಪಿಸುವುದು ಮತ್ತು ನಿರ್ವಹಿಸುವುದು.

ಮುನಿಸಿಪಲ್ ಕೌನ್ಸಿಲುಗಳ ವಿವೇಚನಾತ್ಮಕ ಪ್ರಕಾರ್ಯಗಳು:- ಪ್ರತಿಯೊಂದು ಮುನಿಸಿಪಲ್ ಕೌನ್ಸಿಲು ತನ್ನ ವಿವೇಚನಾನುಸಾರ ಈ ಕೆಳಕಂಡ ಎಲ್ಲಾ ಅಥವಾ ಯಾವುದೇ ವಿಷಯಗಳ ಬಗ್ಗೆ ಸಂಪೂರ್ಣವಾಗಿಯೇ ಆಗಲಿ ಅಥವಾ ಭಾಗಶಃವಾಗಿಯಾಗಲಿ ಉಪಬಂಧಿಸಬಹುದು. ಎಂದರೆ –

(ಎ) ಈ ಹಿಂದೆ ಕಟ್ಟದ್ದ ಅಥವಾ ಕಟ್ಟಿಲ್ಲದ ಪ್ರದೇಶಗಳಲ್ಲಿ ಹೊಸ ಸಾರ್ವಜನಿಕ ಬೀದಿಗಳನ್ನು ರಚಿಸುವುದು ಮತ್ತು ಅದೇ ಉದ್ದೇಶಕ್ಕಾಗಿ ಭೂವಿಯನ್ನು, ಅಂಥ ಬೀದಿಗೆ ಹೊಂದಿಕೊಂಡು ಕಟ್ಟಡಗಳ ಅಥವಾ ಅದರ ಅಂಗಳಗಳ ನಿರ್ಮಾಣಕ್ಕಾಗಿ ಅಗತ್ಯವಿರುವ ಭೂವಿಯನ್ನು ಒಳಗೊಂಡು ಅರ್ಜಿಸುವುದು;

(ಬಿ) ಸಾರ್ವಜನಿಕ ಉದ್ಯಾನಗಳು, ತೋಟಗಳು, ಗ್ರಂಥಾಲಯಗಳು, ವಸ್ತು ಸಂಗ್ರಹಾಲಯಗಳು, ಮಾನಸಿಕ ಆಸ್ಪತ್ರೆಗಳು, ಸಭಾಂಗಣಗಳು, ಕಚೇರಿಗಳು, ಧರ್ಮಾಶಾಲೆಗಳು, ಛತ್ರಗಳು, ಮುಸಾಫಿರ್ ಖಾನೆಗಳು, ವಿಶ್ರಾಂತಿ ಗೃಹಗಳು, ಅಸಮರ್ಥ ಅಥವಾ ನರ್ಗತಿಕ ವ್ಯಕ್ತಿಗಳಿಗಾಗಿ ಗೃಹಗಳು ಮತ್ತು ಇತರ ಸಾರ್ವಜನಿಕ ಕಟ್ಟಡಗಳನ್ನು ನಿರ್ಮಿಸುವುದು, ಸ್ಥಾಪಿಸುವುದು ಅಥವಾ ನಿರ್ಹಿಸುವುದು;

(ಸಿ) ನಿರ್ಗತಿಕ ಮಹಿಳೆಯರಿಗೆ ಆಶ್ರಯ ಒಗಿಸುವುದು;

(ಡಿ) ಬಡವರ ವಾಸಕ್ಕಾಗಿ ಸೂಕ್ತ ನೈರ್ಮಲ್ಯ ಗೃಹಗಳನ್ನು ಅವಶ್ಯವಿರುವಲ್ಲಿ ನಿರ್ಮಿಸುವುದು ಮತ್ತು ನಿರ್ವಹಿಸುವುದು ಮತ್ತು ಅಂಥ ಗೃಹಗಳ ನಿರ್ಮಾಣಕ್ಕಾಗಿ ಅಥವಾ ಅದಕ್ಕೆ ಸಂಬಂಧಿಸಿದಂತೆ ಅವಶ್ಯ ಮೇಲ್ಪಾಟುಗಳನ್ನು ಮಾಡುವುದಕ್ಕಾಗಿ ಸಾಲಗಳನ್ನು ಮಂಜೂರು ಮಾಡುವುದು;

(ಇ) ಮುನಿಸಿಪಲ್ ಕೌನ್ಸಿಲ್ ನಿಯೋಜಿಸಿರುವ ಕಸಗುಡಿಸುವವರು ಮತ್ತು ಜಾಲಿಮಾಲಿಗಳನ್ನು ಹೊರತುಪಡಿಸಿ, ಯಾವುದೇ ವರ್ಗದ ನೌಕರರಿಗೆ ಸ್ಥಳಾವಕಾಶವನ್ನು ಒದಗಿಸುವುದು ಅಥವಾ ಈ ಬಗ್ಗೆ ನಿಯಮಿಸಲಾದ ನಿಯಮಗಳಿಗೆ ಒಳಪಟ್ಟು ಗೃಹಗಳ ನಿರ್ಮಾಣಕ್ಕಾಗಿ ಸಾಲಗಳನ್ನು ಮಂಜೂರು ಮಾಡುವುದು.;

(ಜಿ) ರಸ್ತೆ ಬದಿಯ ಮತ್ತು ಇತರ ಮರಗಳನ್ನು ನೆಡುವುದು ಮತ್ತು ಕಾಪಾಡುವುದು;

(ಎಚ್) ಅಂಕಿ ಅಂಶಗಳನ್ನು ತೆಗೆದುಕೊಳ್ಳುವುದು ಮತ್ತು ಜನನ-ಮರಣ ಅಂಕಿ ಅಂಶಗಳ ಸರಿಯಾದ ನೊಂದಣಿಯನ್ನು ಪಡೆದುಕೊಳ್ಳಲು ನೆರವಾಗುವ ಮಾಹಿತಿಗಾಗಿ ಪಾರೊತೋಷಕಗಳನ್ನು ಕೊಡುವುದು;

(ಐ)ಮೋಜಣಿ ಮಾಡುವುದು;

(ಜಿ) 256ನೇ ಪ್ರಕರಣದಲ್ಲಿ ನಮೂಸಿದಿದ ಅಸಹ್ಯಕರ ವೃತ್ತಿಗಳನ್ನು ನಡೆಸಲು ಸೂಕ್ತ ಸ್ಥಳಗಳನ್ನು ಪಡೆದುಕೊಳ್ಳುವುದು ಅಥವಾ ಪಡೆದುಕೊಳ್ಳಲು ಸಹಾಯ ಮಾಡುವುದು;

(ಕೆ) ಮುನಿಸಿಪಲ್ ಕೌನ್ಸಿಲ್ ನಿಯಂತ್ರಣದಲ್ಲಿರುವ ಗ್ರಾಮಸಾರ ಚರಂಡಿಯೊಳಕ್ಕೆ ಅದರ ಗ್ರಾಮಸಾರವನ್ನು ಸ್ವೀಕರಿಸಲು ಮತ್ತು ಹಾಯಿಸುವುದಕ್ಕಾಗಿ, ಖಾಸಗಿ ಆವರಣಗಳ ಮೇಲೆ ಅಥವಾ ಅವುಗಳ ಉಪಯೋಗಕ್ಕಾಗಿ ಸಂಪುಟಗಳು, ಜೋಡಣೆಗಳು, ಕೊಳವೆಗಳು ಮತ್ತು ಯಾವುದೇ ಬಗೆಯ ುಪಕರಣಗಳನ್ನು ಸರಬರಾಜು ಮಾಡುವುದು, ನಿರ್ಮಿಸುವುದು ಮತ್ತು ನಿರ್ವಹಿಸುವುದು;

(ಎಲ್) ಸಾರ್ವಜನಿಕ ಸ್ಥಳಗಳಲ್ಲಿ ಅಥವಾ ಸಾರ್ವಜನಿಕರು ಸೇರುವ ಸ್ಥಳಗಳಲ್ಲಿ ಸಂಗೀತ ಅಥವಾ ಇತರ ಮನರಂಜನೆಗಳನ್ನು ಒದಗಿಸುವುದು; (ಎಮ್) ಸಾರ್ವಜನಿಕ ಆರೋಗ್ಯ ಅಥವಾ ಶಿಶು ಕಲ್ಯಾಣದ ಸಂವರ್ಧನೆ;

(ಎನ್) [ಪೌರಸಭಾ ಪ್ರದೇಶ] ದೊಳಗೆ ಅಥವಾ ಹೊರಗೆ ಮಾನವಯಾತನೆಯ ಪರಿಹಾರಕ್ಕಾಗಿ ಯಾವುದೇ ಸಾರ್ವಜನಿಕ ನಿಧಿಗಳಿಗೆ ವಂತಿಗೆ ಕೊಡುವುದು;

(ಒ) ಸಾರ್ವಜನಿಕ ಸಭೆಯಲ್ಲಿ ಅಂಗೀಕರಿಸಿದ ನಿರ್ಣಯದ ಮೂಲಕ ಮತ್ತು ಕೌನ್ಸಿಲರುಗಳ ಒಟ್ಟು ಸಂಖ್ಯೆಯ ಅರ್ದದಷ್ಟರವರಿಂದ ಬೆಂಬಲಿಸಿದ ಮತ್ತು ಪಟ್ಟಣ ಮುನಿಸಿಪಲ್ ಕೌನ್ಸಿಲಿನ ಸಂದಂರ್ಭದಲ್ಲಿ ಡೆಪ್ಯುಟಿ ಕಮೀಷನರ್ ಮತ್ತು ನಗರ ಮುನಿಸಿಪಲ್ ಕೌನ್ಸಿಲ್ ಸಂದಂರ್ಭದಲ್ಲಿ [ಪೌರಾಡಳಿತ ನಿರ್ದೇಶಕ]ರ ಪೂರ್ವ ಮಂಜೂರಾತಿಯೊಂದಿಗೆ [ಪೌರಸಭಾ ಪ್ರದೇಶ] ದೊಳಗೆ ಯಾವುದೇ ಸಾರ್ವಜನಿಕ ಸತ್ಕಾರ, ಸಾರ್ವಜನಿಕ ಸಮಾರಂಭ, ಸಾರ್ವಜನಿಕ ಉತ್ಸವ,, ಸಾರ್ವಜನಿಕ ಮನರಂಜನೆ ಅಥವಾ ಸಾರ್ವಜನಿಕ ವಸ್ತು ಪ್ರದರ್ಶನವನ್ನು ಏರ್ಪಾಡು ಮಾಡುವುದು;

ಪರಂತು, ಅಂಥ ಸತ್ಕಾರ, ಉತ್ಸವ, ಮನರಂಜನೆ, ಅಥವಾ ಪ್ರದರ್ಶನದ ಮೇಲಿನ ವೆಚ್ಚವು ಸಾಮಾನ್ಯವಾಗಿ ಅಥವಾ ವಿಶೇಷವಾಗಿ ನಿಯಮಿಸಬಹುದಾದಂಥ ಪರಿಮಿತಿಗಳನ್ನು ಮೀರತಕ್ಕುದ್ದಲ್ಲ;

(ಪಿ) ಅಭಾವ ಕಾಲದಲ್ಲಿ ಜೀವನಾವಶ್ಯಕಗಳ ಮಾರಾಟಕ್ಕಾಗಿ ಅಂಗಡಿಗಳು ಅಥವಾ ಮಳಿಗೆಗಳನ್ನು ಎರ್ಪಾಡು ಮಾಡುವುದು ಅಥವಾ ನಿರ್ವಹಿಸುವುದು;

(ಕ್ಯೂ) ನಿರ್ಗತಿಕ ಅನಾಥರಿಗೆ ಮತ್ತು ನಿರ್ಗತಿಕ ಕುಂಟರಿಗೆ ವಸತಿ ಒದಗಿಸುವುದು ಮತ್ತು ನಿರ್ವಹಿಸುವುದು;

(ಆರ್) ಉಗ್ರಾಣಗಳ ಸ್ಥಾಪನೆಯನ್ನು ನಿಯಂತ್ರಿಸುವ ಯಾವುದೇ ಕಾನೂನಿನ ಉಪಬಂಧಗಳಿಗೊಳಪಟ್ಟು ಉಗ್ರಾಣಗಳನ್ನು ನಿರ್ಮಿಸುವುದು, ಸ್ಥಾಪಿಸುವುದು ಮತ್ತು ನಿರ್ಹಿಸುವುದು;

(ಎಸ್) ಡೈರಿ ಪಾರಂಗಳು ಮತ್ತು ಕುದುರೆಗಳ ತಳಿ ಸಂವರ್ಧನೆ ಕೇಂದ್ರಗಳನ್ನು ಸ್ಥಾಪಿಸುವುದು ಮತ್ತು ನಿರ್ಹಿಸುವುದು;

(ಟಿ) [ಪೌರಸಭಾ ಪ್ರದೇಶ] ದೊಳಗೆ ಸಾರಿಗೆ ಸೌಲಭ್ಯಗಳ ವ್ಯವಸ್ಥೆ;

(ಯು) ಆಂಬ್ಯುಲೆನ್ಸ್ ಸೇವೆಯನ್ನು ಇಟ್ಟುಕೊಂಡು ಬರುವುದು;

(ವಿ) [ಪೌರಸಭಾ ಪ್ರದೇಶ] ದ ಪರಿನಿತಿಗಲಾಚೆ ನೀರಿನ ಸರಬರಾಜು; (ಡಬ್ಲ್ಯೂ) ಹುಲ್ಲುಗಾವಲುಗಳ ಸರ್ಜನೆ ಮತ್ತು ನಿರ್ವಹಣೆ;

(ಎಕ್ಸ್) [ಪೌರಸಭಾ ಪ್ರದೇಶ] ಗಳ ಪರಿಮೀತಿಗಳಾಚೆ ಟೆಲಿಫೋನ್ ತಂತಿ ಮಾರ್ಗವನ್ನು ವಿಸ್ತರಿಸಿದಾಗ ಸರ್ಆರದ ಪೂರ್ವ ಮಂಜೂರಾತಿಗೆ ಒಳಪಟ್ಟು ಟೆಲಿಫೋನ್ ತಂತಿ ಮಾರ್ಗ ನಿರ್ಮಾಣಕ್ಕಾಗಿ ವೆಚ್ಚ ಮಾಡಿದ ಹಣದ ಮೇಲೆ ಬಡ್ಡಿ ಸಂದಾಯಕ್ಕೆ ಖಾತರಿ ಕೊಡುವುದು.;

(ವೈ) ಪೌರಸಭೆಯ ನಿಯೋಜಿತರು ಅಥವಾ ಪೌರಸಭೆ ನಿಯೋಜಿತರ ಯಾವುದೇ ವರ್ಗ ಮತ್ತು ಅವರ ಅವಲಂಬಿತರ ಯೋಗಕ್ಷೇಮವನ್ನು ವೃದ್ಧಿಪಡಿಸುವುದು;

(ಜಡ್) ಸಾರ್ವಜನಿಕ ಸಾಗಣೆಗಾಗಿ ಯಂತ್ರದಿಂದ ಚಾಲಿತವಾದ, ಸಾರಿಗೆ ಸೌಲಭ್ಯಗಳನ್ನು ನಿರ್ಮಿಸುವುದು, ಖರೀದಿಸುವುದು, ಸಂಘಟಿಸುವುದು, ನಿರ್ವಹಿಸುವುದು, ವಿಸ್ತರಿಸುವುದು ಮತ್ತು ವ್ಯವಸ್ಥಾಪಿಸುವುದು;

(ಎಎ) ವಿದ್ಯುಚ್ಛಕ್ತಿ ಸರಬರಾಜಿಗಾಗಿ ಯಾವುದೇ ಕಾಮಗಾರಿಗಳನ್ನು ನಿರ್ಮಿಸುವುದು, ನಿರ್ವಹಿಸುವುದು, ದುರಸ್ಥಿ ಮಾಡುವುದು ಮತ್ತು ಖರೀದಿಸುವುದು;

(ಬಿಬಿ) ಗ್ರಂಥಾಲಯಗಳು ಮತ್ತು ವಸ್ತು ಸಂಗ್ರಹಾಲಯ, ಯಾವುದೇ ಆಸ್ಪತ್ರೆ, ಔಷಧಾಲಯ ಅಥವಾ ಸಾರ್ವಜನಿಕ ವೈದ್ಯಕೀಯ ಪರಿಹಾರವನ್ನು ಒದಗಿಸುವ ಅಂಥದೇ ಸಂಸ್ಥೆ ಅಥವಾ ಧರ್ಮಾರ್ಥ ಸ್ವರೂಪದ ಯಾವುದೇ ಇತರ ಸಂಸ್ಥೆಯೂ ಒಳಗೊಂಡಂತೆ ಶೈಕ್ಷೀಕ ಸಂಸ್ಥೆಗಳ ನಿರ್ಮಾಣ, ಸ್ಥಾಪನೆ ಮತ್ತು ನಿರ್ವಹಣೆಗಾಗಿ ವಂತಿಗೆಗಳನ್ನು ಕೊಡುವುದು;

(ಸಿಸಿ) ಸಾರ್ವಜನಿಕ ಸ್ನಾನಗೃಹಗಳನ್ನು ನಿರ್ಮಿಸುವುದು, ನಿರ್ವಹಿಸುವುದು ಮತ್ತು ವ್ಯವಸ್ಥೆ ಮಾಡುವುದು;

(ಡಿಡಿ) ಗೃಹ ಕೈಗಾರಿಕೆಗಳನ್ನು ಪುರುಜ್ಜೀವನಗೊಳಿಸುವುದು ಅಥವಾ ಸಂವರ್ಧನೆಗೊಳಿಸುವುದು;

(ಇಇ) ಪಶುವೈದ್ಯ ಾಸ್ಪತ್ರೆಗಳ ನಿರ್ಮಾಣ ಮತ್ತು ನಿರ್ವಹಣೆಯೂ ಒಳಗೊಂಡಂತೆ ಜಾನುವಾರು ಮತ್ತು ಪಶುಸಂಪತ್ತನ್ನು ಮೇಲ್ಪಾಟುಗೊಳಿಸುವುದು;

(ಎಫ್ಎಫ್) ಪ್ರಸೂತಿ ಗೃಹಗಳು ಮತ್ತು ಶಿಶು ಕಲ್ಯಾಣ ಕೇಂದ್ರಗಳನ್ನು ನಿರ್ವಹಿಸುವುದ;

(ಜಿಜಿ) ಆರ್ಟ್ ಗ್ಯಾಲರಿಗಳನ್ನು ನಿರ್ವಹಿಸುವುದು;

[ಜಿಜಿ1) ಕೊಳಚೆ ಪ್ರದೇಶ ಸುಧಾರಣೆ ಮತ್ತು ಅದನ್ನು ಉತ್ತಮಪಡಿಸುವುದು;

(ಜಿಜಿ2) ನಗರ ಅರಣ್ಯ, ಪರಿಸರ ಮತ್ತು ಜೀವಿ ಪರಿಸರ ಅಂಶಗಳ ವೃದ್ಧಿ;

(ಜಿಜಿ3) ನಗರದಲ್ಲಿನ ದಾರಿದ್ಯ್ರ ನಿರ್ಮೂಲನ;

(ಜಿಜಿ4)ಸಾಂಸ್ಥಿಕ, ಶೈಕ್ಷಣಿಕ ಮತ್ತು ಸೌಂದರ್ಯ ಅಭಿರುಚಿಗೆ ಸಂಬಂಧಪಟ್ಟ ಅಂಶಗಳನ್ನು ವೃದ್ಧಿಪಡಿಸುವದು.]

(ಎಚ್ಎಚ್) ಸಹಕಾರ ಸಂಘಗಳನ್ನು ಸಂವರ್ಧನೆಗೊಳಿಸುವುದು, ರಚಿಸುವುದು, ವಿಸ್ತರಿಸುವುದು ಅಥವಾ ಅವುಗಳಿಗೆ ಸಹಾಯ ಮಾಡುವುದು ಮತ್ತು

(ಐಐ) ಶಿಕ್ಷಣ ಅಥವಾ ಸಾರ್ವಜನಿಕ ಆರೋಗ್ಯ ಸುರಕ್ಷತೆ ಅಥವಾ ಸಾಮಾನ್ಯ ಕಲ್ಯಾಣ ಅಥವಾ ಅನುಕೂಲತೆ ಅಥವಾ ನಿವಾಸಿಗಳ ಆರ್ಥಿಕ ಪರಿಸ್ಥಿತಿಯ ಪ್ರಗತೊಯನ್ನು ವೃದ್ಧಿಗೊಳಿಸುವ ಸಂಭವವಿರುವಂಥ ಅಥವಾ ಈ ಅಧಿನಿಯಮದ ುದ್ದೇಶಗಳನ್ನು ಈಡೇರಿಸುವುದಕ್ಕಾಗಿ ಅವಶ್ಯವಿರುವಂಥ ಇಲ್ಲಿಈ ಮುಂಚೆ ನಿರ್ದಿಷ್ಟವಾಗಿ ಹೆಸರಿಸಿದ ಯಾವುದೇ ಇತರ ವಿಷಯ; ಈ ಬಗ್ಗೆ ವೆಚ್ಚವನ್ನು ಕೌನ್ಸಿಲರುಗಳ ಒಟ್ಟು ಸಂಖ್ಯೆಯ ಮೂರರಲ್ಲಿ ಎರಡರಷ್ಟಕ್ಕಿಂತ ಕಡಿಮೆಯಿಲ್ಲದ ಮತಗಳ ಮೂಲಕ ಮತ್ತು ಸರ್ಕಾರದ ಅನುಮೋದನೆಯೊಂದಿಗೆ ಮುನ್ಸಿಪಲ್ ಕೌನ್ಸಿಲು, ಮುನ್ಸಿಪಲ್ ನಿಧಿಯಮೇಲಿನ ಸಮುಚಿತ ಋಣಭಾರವೆಂದು ನಿರ್ಣಯಿಸಿರಬೇಕು.

ಮೂಲ : ಪೌರಾಡಳಿತ ನಿರ್ದೇಶನಾಲಯ , ಕರ್ನಾಟಕ ಸರ್ಕಾರ.