• ನಿರ್ದೇಶಕರು ಪೌರಾಡಳಿತ ನಿರ್ದೇಶನಾಲಯದ ಮುಖ್ಯಸ್ಥರಾಗಿದ್ದು, ರಾಜ್ಯದ ಜಿಲ್ಲೆಗಳ ಜಿಲ್ಲಾಧಿಕಾರಿಗಳು, ನಗರ ಸ್ಥಳೀಯ ಸಂಸ್ಥೆಗಳು, ಮಹಾನಗರಪಾಲಿಕೆಗಳು ಮತ್ತು ಸಚಿವಾಲಯದ ನಡುವೆ ಸಮನ್ವಯ ಸಾಧಿಸುವುದು ನಿರ್ದೇಶನಾಲಯದ ಪ್ರಮುಖ ಕರ್ತವ್ಯವಾಗಿರುತ್ತದೆ (ಐ.ಎ.ಎಸ್. ಅಧಿಕಾರಿಗಳು ನಿರ್ದೇಶಕರ ಹುದ್ದೆಯನ್ನು ನಿರ್ವಹಿಸುತ್ತಿದ್ದು, ಅವರು ಇಲಾಖೆಯ ಮುಖ್ಯಸ್ಥರಾಗಿರುತ್ತಾರೆ). ನಿರ್ದೇಶನಾಲಯದ ಜವಾಬ್ದಾರಿಯು, ನಗರ ಸ್ಥಳೀಯ ಸಂಸ್ಥೆಗಳ ಕೆಲಸಗಳ ಮೇಲ್ವಿಚಾರಣೆ, ಸೂಕ್ತ ಮಾನವ ಸಂಪನ್ಮೂಲ ನೀತಿಗಳನ್ನು ರೂಪಿಸುವುದು, ನಗರ ಸ್ಥಳೀಯ ಸಂಸ್ಥೆಗಳ ಸಿಬ್ಬಂದಿಗಳ ಮೇಲೆ ನಿಯಂತ್ರಣ ಹೊಂದಿರುವುದು, ನಗರ ಸ್ಥಳೀಯ ಸಂಸ್ಥೆಗಳಲ್ಲಿ ಕಂದಾಯ ಸಂಗ್ರಹಣೆಯ ಮೇಲ್ವಿಚಾರಣೆ, ಖರ್ಚು ವೆಚ್ಚಗಳಲ್ಲಿ ಪಾರದರ್ಶಕತೆ ತರಲು ಸೂಕ್ತ ನೀತಿ ನಿಯಮಗಳನ್ನು ರೂಪಿಸುವುದು, ನಗರ ಸ್ಥಳೀಯ ಸಂಸ್ಥೆಗಳು ಕೈಗೊಳ್ಳುವ ನಿರ್ಧಾರಗಳ ವಿರುದ್ಧ ಮೇಲ್ಮನವಿಗಳನ್ನು ಪರಿಶೀಲಿಸುವುದು, ಸರ್ಕಾರದ ಅನುದಾನಗಳನ್ನು ನಗರ ಸ್ಥಳೀಯ ಸಂಸ್ಥೆಗಳಿಗೆ ಬಿಡುಗಡೆ ಮಾಡುವುದು, ನಿರ್ದೇಶನಾಲಯವು ನಗರ ಸ್ಥಳೀಯ ಸಂಸ್ಥೆಗಳಿಂದ ಅಂಕಿಅಂಶಗಳನ್ನು ಸಂಗ್ರಹ ಮಾಡುವುದರ ಜೊತೆಗೆ ಮುನಿಸಿಪಲ್ ಅಂಕಿಅಂಶಗಳನ್ನು ಸಿದ್ಧಪಡಿಸುವಲ್ಲಿ ಸಹಾಯ ಮಾಡುತ್ತದೆ. ನಿರ್ದೇಶನಾಲಯವು ನಿರ್ವಹಿಸುವ ವಿವಿಧ ಚಟುವಟಿಕೆಗಳ ವಿವರಗಳು ಕೆಳಕಂಡಂತಿದೆ :-

ಎ. ಕರ್ನಾಟಕ ಪೌರಸಭೆಗಳ ಕಾಯ್ದೆ, 1964 ಹಾಗೂ ಮುನಿಸಿಪಲ್ ಮ್ಯಾನ್ಯುಯಲ್ ಸಂಪುಟ-1 ಮತ್ತು 2 ರಲ್ಲಿ ನಿಗಧಿಪಡಿಸಲಾಗಿರುವ ನಿಯಮಗಳ ಉಪಬಂಧಗಳ ರೀತ್ಯಾ ಪ್ರತ್ಯಾಯೋಜಿಸಿರುವ ಅಧಿಕಾರವನ್ನು ನಿರ್ದೇಶಕರು ಚಾಲಾಯಿಸುತ್ತಾರೆ. (ಜಿಲ್ಲಾಧಿಕಾರಿಗಳು, ಸಹಾಯಕ ಆಯುಕ್ತರು, ತಹಶೀಲ್ದಾರ್, ನಗರ ಸ್ಥಳೀಯ ಸಂಸ್ಥೆಗಳಿಗೆ ಪ್ರತ್ಯಾಯೋಜಿಸಿರುವ ಅಧಿಕಾರಗಳನ್ನು ಹೊರತುಪಡಿಸಿ) .

ಬಿ. ಕರ್ನಾಟಕ ಪೌರಸಭೆಗಳ ಕಾಯ್ದೆ, 1964 ರ ಸೆಕ್ಷನ್ 303 ರೀತ್ಯಾ ಚೀಫ್ ಕಂಟ್ರೋಲಿAಗ್ ಅಥಾರಿಟಿ ಆಗಿ ಕರ್ತವ್ಯಗಳನ್ನು ನಿರ್ವಹಿಸುವುದು.

ಸಿ. ಗ್ರೂಪ್ ಬಿ ಮತ್ತು ಸಿ ನೌಕರರುಗಳಿಗೆ ಸಂಬAಧಿಸಿದAತೆ ಶಿಸ್ತು ಪ್ರಾಧಿಕಾರದ ಅಧಿಕಾರವನ್ನು ಚಾಲಾಯಿಸುವುದು.

ಡಿ. ಸಿ & ಆರ್ ನಿಯಮಗಳಡಿಯಲ್ಲಿ ನಿಯಮ 4(2)(ಬಿ) ರೀತ್ಯಾ ಗ್ರೂಪ್ ಬಿ ಮತ್ತು ಸಿ ನೌಕರರ ಅನುಕಂಪ ಆಧಾರಿತ ನೇಮಕಾತಿ ಪ್ರಾಧಿಕಾರ.

ಇ. ಈ ಕೆಳಕಂಡ ಕೇಂದ್ರ ಪ್ರಾಯೋಜಿತ ಯೋಜನೆಗಳ ಮೇಲ್ವಿಚಾರಣೆ.-

   i. ಎಸ್.ಎಫ್.ಸಿ ಮುಕ್ತನಿಧಿ /ವಿಶೇಷ/ ಕುಡಿಯುವ ನೀರಿನ ಅನುದಾನ

   ii. ಕೇಂದ್ರ ಹಣಕಾಸು ಆಯೋಗದ ಅನುದಾನಗಳು

   iii. ಪೌರ ಸುಧಾರಣಾ ಯೋಜನೆಗಳು

   iv. ಘನತ್ಯಾಜ್ಯ ವಸ್ತು ನಿರ್ವಹಣೆ

   v. ಸ್ವಚ್ಛ ಭಾರತ ಮಿಷನ್ (ನಗರ)

   vi. ಸಿ.ಎಂ.ಎಸ್.ಎಂ.ಟಿ.ಡಿ.ಪಿ. (ನಗರೋತ್ಥಾನ)

   viii. ಇಂದಿರಾ ಕ್ಯಾಂಟೀನ್ ಯೋಜನೆ

   viii. ಪೌರ ಕಾರ್ಮಿಕರ ಗೃಹ ಭಾಗ್ಯ ಯೋಜನೆ

• ರಾಜ್ಯ ಸರ್ಕಾರವು ಕಾಲಕಾಲಕ್ಕೆ ನಿಗಧಿಪಡಿಸುವ ಷರತ್ತು ಹಾಗೂ ನಿಬಂಧನೆಗೊಳಪಡಿಸಿ ನಗರ ಸ್ಥಳೀಯ ಸಂಸ್ಥೆಗಳಿಗೆ ವಿವಿಧ ಅನುದಾನಗಳನ್ನು ವಿತರಿಸುವುದು.

• ನಗರ ಸ್ಥಳೀಯ ಸಂಸ್ಥೆಗಳು ತಮ್ಮ ಸಂಪನ್ಮೂಲಗಳನ್ನು ಸೃಜಿಸಿಕೊಳ್ಳಲು ಹಾಗೂ ತೆರಿಗೆ ಮತ್ತು ಶುಲ್ಕಗಳನ್ನು ನಿಯಮಬದ್ಧವಾಗಿ ಸಂಗ್ರಹಿಸಲು ಅನುಕೂಲವಾಗುವಂತೆ ಸೂಕ್ತ ನಿಯಮ ಮತ್ತು ಮಾರ್ಗಸೂಚಿಗಳನ್ನು ರೂಪಿಸುವುದು ಮತ್ತು ಅನುಷ್ಟಾನಗೊಳಿಸುವುದು ನಿರ್ದೇಶನಾಲಯದ ಕರ್ತವ್ಯವಾಗಿರುತ್ತದೆ.

• ಕರ್ನಾಟಕ ಡಾಟಾ ಮುನಿಸಿಪಲ್ ಸೊಸೈಟಿಯಿಂದ ಕಾಲಕಾಲಕ್ಕೆ ಅವಶ್ಯಕಗನುಗುಣವಾಗಿ ಅಸ್ತಿತ್ವದಲ್ಲಿರುವ ಸಾರ್ವಜನಿಕರಿಗೆ ಒದಗಿಸುವ ಸೇವೆಗಳ ತಂತ್ರಾಂಶಗಳ ನವೀಕರಣ ಹಾಗೂ ಹೊಸ ಪೌರ ಸುಧಾರಣಾ ಯೋಜನೆಗಳನ್ನು ಸಿದ್ದಪಡಿಸುವುದು.

• ಇಂದಿನ ನಗರ ಪ್ರಕ್ರಿಯೆಗಳನ್ನು ನಿರ್ವಹಿಸುವ ಜ್ಞಾನ ಕೌಶಲ್ಯ ಮತ್ತು ಮನೋಭಾವವನ್ನು ಸುಧಾರಿಸಲು ಕ್ರಿಯಾಶೀಲ-ಆಧಾರಿತ ತರಬೇತಿಗಳನ್ನು ನಗರ ವ್ಯವಸ್ಥಾಪಕರ ಸಂಘ, ಕರ್ನಾಟಕದ ಮೂಲಕ ಕಲ್ಪನೆಗಳು / ಅಭ್ಯಾಸಗಳನ್ನು ವಿನಿಮಯ ಮಾಡಲು ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಟ್ಟದ ಕಾರ್ಯಾಗಾರಗಳು / ಅಧ್ಯಯನ ಪ್ರವಾಸಗಳನ್ನು ನಡೆಸುವುದು.

 

ಮೂಲ : ಪೌರಾಡಳಿತ ನಿರ್ದೇಶನಾಲಯ , ಕರ್ನಾಟಕ ಸರ್ಕಾರ.