• ಜಂಟಿ ನಿರ್ದೇಶಕರು(ಹಣಕಾಸು),ಇವರು ಲೆಕ್ಕ ಶಾಖೆಯ ಮುಖ್ಯಸ್ಧರು.

• ನಗರ ಸ್ಥಳೀಯ ಸಂಸ್ಥೆಗಳಿಗೆ/ಅನುಷ್ಟಾನ ಸಂಸ್ಥೆಗಳಿಗೆ ವಿವಿಧ ಯೋಜನೆಗಳಾದ ಎಸ್.ಎಫ್.ಸಿ ಪ್ರವೇಶತೆರಿಗೆ ಅವತರಣ ಮತ್ತು ಇತರೆ ಅವತರಣ, ಅಮೃತ್ ಯೋಜನೆ, ಸ್ವಚ್ಛ ಭಾರತ್ ಮಿಷನ್, ಪೌರಕಾರ್ಮಿಕ ಗೃಹ ಭಾಗ್ಯ ಯೋಜನೆ ಮತ್ತು 15ನೇ ಹಣಕಾಸು ಯೋಜನೆಗಳಡಿಯಲ್ಲಿ ಅಭಿವೃದ್ಧಿ ಕಾಮಗಾರಿಗಳಿಗೆ ಅನುದಾನಗಳನ್ನು ಬಿಡುಗಡೆ ಮಾಡುವ ಜವಾಬ್ದಾರಿ ಜಂಟಿ ನಿರ್ದೇಶಕರು(ಹಣಕಾಸು) ರವರದ್ದಾಗಿರುತ್ತದೆ.

• ಎಸ್.ಎಫ್.ಸಿ ಯೋಜನೆಯ, 15ನೇ ಹಣಕಾಸು ಯೋಜನೆ & ಇತರೆ ಯೋಜನೆವಾರು ಆಯವ್ಯಯವನ್ನು ತಯಾರಿಸಿ, ಇತರೆ ಶಾಖೆಗಳಿಂದ ಕ್ರೂಢೀಕರಿಸಿ ಸರ್ಕಾರಕ್ಕೆ ಸಲ್ಲಿಸುವುದು.

ಪೌರಾಡಳಿತ ನಿರ್ದೇಶನಾಲಯ ಮತ್ತು ಜಿಲ್ಲಾ ನಗರಾಭಿವೃದ್ಧಿ ಕೋಶಗಳ ವೇತನ ಮತ್ತು ವೇತನೇತರ ಆಯವ್ಯಯ ತಯಾರಿಸಿ ಸರ್ಕಾರಕ್ಕೆ ಸಲ್ಲಿಸುವುದು.

• ಪೌರಾಡಳಿತ ನಿರ್ದೇಶನಾಲಯದ ಖಾಯಂ ನೌಕರರು/ಗುತ್ತಿಗೆ/ಹೊರಗುತ್ತಿಗೆ ನೌಕರರ ವೇತನ ಪಾವತಿ.

ವೇತನೇತರ ಅನುದಾನಗಳಾದ ಪ್ರಯಾಣ ಭತ್ಯೆ, ಹೊರಗುತ್ತಿಗೆ ನೌಕರರ ವೇತನ, ಸಾಮಾನ್ಯ ವೆಚ್ಚ, ದೂರವಾಣಿ ವೆಚ್ಚ, ಕಟ್ಟಡ ವೆಚ್ಚ & ಸಾರಿಗೆ ವೆಚ್ಚವನ್ನು ಜಿಲ್ಲಾ ನಗರಾಭಿವೃದ್ಧಿ ಕೋಶಗಳಿಗೆ ಕಾಲಕಾಲಕ್ಕೆ ಬಿಡುಗಡೆ ಮಾಡುವುದು.

• ವಿವಿಧ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಕೆ.ಎಂ.ಎ.ಎಸ್ ಅಧಿಕಾರಿಗಳ ವೇತನ ಬಿಡುಗಡೆ. • ಅಧಿಕಾರಿ/ಸಿಬ್ಬಂದಿಗಳ ಸೇವಾ ಮತ್ತು ಆರ್ಥಿಕ ವಿಷಯಗಳ ಬಗ್ಗೆ ಅಭಿಪ್ರಾಯ ನೀಡುವುದು.

• ಕರ್ನಾಟಕ ರಾಜ್ಯ ಲೆಕ್ಕ ಪರಿಶೋಧನೆ ಮತ್ತು ಲೆಕ್ಕ ಪತ್ರ ಇಲಾಖಾ ವತಿಯಿಂದ ಕೈಗೊಳ್ಳಲಾಗುವ ಲೆಕ್ಕ ಪರಿಶೋಧನಾ ವರದಿಗಳಿಗೆ ಅನುಪಾಲನಾ ವರದಿಗಳನ್ನು ಸಲ್ಲಿಸುವುದು ಹಾಗೂ ಜಿಲ್ಲಾ ಹಂತದಲ್ಲಿ ಅಡ್ಹಾಕ್ ಸಮಿತಿ ವರದಿಗೆ ಅನುಪಾಲನಾ ವರದಿಗಳ ಮೇಲ್ವಿಚಾರಣೆ.

• ಮಹಾಲೇಖಪಾಲರು ಕೈಗೊಳ್ಳಲಾಗುವ ಲೆಕ್ಕಪರಿಶೋಧನಾ ವರದಿಗಳಿಗೆ, ಸಿ&ಎಜಿ ವರದಿಗಳಿಗೆ, ಸ್ಥಳೀಯ ಸಂಸ್ಥೆಗಳು ಮತು ಪಂಚಾಯತ್ರಾಜ್ ಸಂಸ್ಥೆಗಳ ಸಮಿತಿಗಳ ವರದಿಗಳಿಗೆ ಅನುಪಾಲನಾ ವರದಿ ಸಲ್ಲಿಸುವುದು.

ಕೆಂ.ಎA.ಎ.ಎಸ್ ಅಧಿಕಾರಿಗಳ ಪಿಂಚಣಿ ಪ್ರಸ್ತಾವನೆಗಳನ್ನು ಮಹಾಲೇಖಪಾಲಕರಿಗೆ ಸಲ್ಲಿಸುವುದು.

• ನಗರ ಸ್ಥಳೀಯ ಸಂಸ್ಥೆಗಳ ಹೆಚ್.ಆರ್.ಎಂ.ಎಸ್ ತAತ್ರಾAಶದಲ್ಲಿ ಉAಟಾಗುವ ತಾAತ್ರಿಕ ದೋಷಗಳ ನಿರ್ವಹಣೆ.

• ನಗರ ಸ್ಥಳೀಯ ಸಂಸ್ಥೆಗಳ ಖಾಯಂ ಅಧಿಕಾರಿ/ನೌಕರರ ಎನ್.ಪಿ.ಎಸ್ ಅನುಷ್ಟಾನ ಮತ್ತು ಮೇಲ್ವಿಚಾರಣೆ.

• ಪೌರಾಡಳಿತ ನಿರ್ದೇಶನಾಲಯದ ಬ್ಯಾಂಕ್ ಖಾತೆಗಳು ಮತ್ತು ಪಿ.ಡಿ.ಖಾತೆಗಳನ್ನು ಡಿಜಿಟಲ್ ಪಾರ್ಮೆಟ್ನಲ್ಲಿ ನಿರ್ವಹಣೆ & ಮೇಲ್ವಿಚಾರಣೆ.

• ಎಲ್ಲಾ ಯೋಜನೆಗಳು ಸಂಪೂರ್ಣವಾಗಿ ಗಣಕೀಕರಣಗೊಳಿಸಿ, ರಾಜ್ಯ ಸರ್ಕಾರದ ಯೋಜನೆಗಳನ್ನು ಆನ್ಲೈನ್ ತಂತ್ರಾಶ ಅದರೆ ಖಜಾನೆ-2, ಎಫ್.ಬಿ.ಎ.ಎಸ್ ಹಾಗೂ ಕೇಂದ್ರ ಸರ್ಕಾರದ ಯೋಜನೆಗಳನ್ನು ಪಿ.ಎಫ್.ಎಂ.ಎಸ್ ಅನ್ಲೈನ್ ಪೋರ್ಟಲ್ನಲ್ಲಿ ನಿರ್ವಹಿಸಲಾಗಿದೆ.

• ಲೆಕ್ಕ ಶಾಖೆಗೆ ಸಂಬAಧಪಟ್ಟAತೆ ಲೆಕ್ಕ ಶಾಖೆಯ ಸಹಾಯಕ ನಿರ್ದೇಶಕರು, ಸಾರ್ವಜನಿಕ ಮಾಹಿತಿ ಅಧಿಕಾರಿಯಾಗಿರುತ್ತಾರೆ.

• ಪೌರಾಡಳಿತ ನಿರ್ದೇಶಕರು ಸೂಚಿಸುವ ಇನ್ನಿತರೆ ಕೆಲಸ ಕಾರ್ಯಗಳನ್ನು ನಿರ್ವಹಿಸುವುದು.

ಮೂಲ : ಪೌರಾಡಳಿತ ನಿರ್ದೇಶನಾಲಯ , ಕರ್ನಾಟಕ ಸರ್ಕಾರ.