• ಜಂಟಿನಿರ್ದೇಶಕರು (ಅಭಿವೃದ್ಧಿ) ರವರು ಅಭಿವೃದ್ಧಿ ಶಾಖೆಯ ಮುಖ್ಯಸ್ಥರು.

ಕೇಂದ್ರ ಪುರಸ್ಕೃತ ಯು.ಐ.ಡಿ.ಎಸ್.ಎಸ್.ಎಂ.ಟಿ. ಮತ್ತು‘ ಅಮೃತ್’ ಯೋಜನೆಗಳ ಹಾಗು ಕೇಂದ್ರ ಹಣಕಾಸು ಆಯೋಗದ 14ನೇ / 15ನೇ ಹಣಕಾಸು ಆಯೋಗದ ಅನುದಾನದ ಅನುಷ್ಠಾನ ಮತ್ತು ಮೇಲ್ವಿಚಾರಣೆಗಳು ಜಂಟಿನಿರ್ದೇಶಕರು (ಅಭಿವೃದ್ಧಿ)ರವರ ಜವಾಬ್ದಾರಿಯಾಗಿರುತ್ತದೆ.

• ಬೀದಿ ದೀಪಗಳಲ್ಲಿ ಇಂಧನ ಕಾರ್ಯಕ್ಷಮತೆಯ ಯೋಜನೆಯ ಅನುಷ್ಠಾನ – ಎಲ್.ಇ.ಡಿ. ಬೀದಿ ದೀಪಗಳಿಂದ ಪ್ರಸ್ತುತ ಇರುವ ಸಾಂಪ್ರದಾಯಿಕ ಸೋಡಿಯಂ ವೇಪರ್ಸ್, ಮರ್ಕ್ಯೂರಿ ವೇಪರ್ಸ್, ಟ್ಯೂಬ್ಲೈಟ್, ಸಿ.ಎಫ್.ಎಲ್. ಬೀದಿ ದೀಪಗಳ ಬದಲಾವಣೆ.

ಆಸ್ತಿ ಮತ್ತು ವ್ಯಾಪಾರ ಪರವಾನಿಗೆ, ಬಳಕೆದಾರರಶುಲ್ಕ, ಜಾಹೀರಾತು ಶುಲ್ಕಗಳ ಬಗ್ಗೆ ಸುತ್ತೋಲೆ ಮತ್ತು ಮಾರ್ಗಸೂಚಿ ಹೊರಡಿಸುವ ಬಗ್ಗೆ.

ಕಟ್ಟಡ ಪರವಾನಿಗೆ ಬಗ್ಗೆ ಮಾರ್ಗಸೂಚಿಗಳು.

ಮುನಿಸಿಪಲ್ ಆಸ್ತಿಗಳು, ಅಂಗಡಿಗಳು, ವಾಣಿಜ್ಯ ಮಳಿಗೆಗಳು, ಖಾತೆಗಳಿಗೆ ಸಂಬಂಧಿಸಿದ ಪ್ರಸ್ತಾವನೆಗಳು.

ಸಾರ್ವಜನಿಕ ನಿವೇಶನ ಮತ್ತು ಮುನಿಸಿಪಲ್ ಭೂಮಿಗಳು.

• ನಗರ ಸ್ಥಳೀಯ ಸಂಸ್ಥೆಗಳಲ್ಲಿ ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ, ಕೆ.ಯು.ಐ.ಡಿ.ಎಫ್.ಸಿ. ಸಂಸ್ಥೆಗಳಿಂದ ಅನುಷ್ಠಾನಿಸುತ್ತಿರುವ ನೀರು ಸರಬರಾಜು ಮತ್ತು ಒಳಚರಂಡಿ ಯೋಜನೆಗಳಿಗೆ ಸಂಬಂಧಿಸಿದ ವಿಷಯಗಳು.

ಜಲಶಕ್ತಿ ಅಭಿಯಾನದ ಮೇಲ್ವಿಚಾರಣೆ.

ನೀರು ಸರಬರಾಜು ಮತ್ತು ಒಳಚರಂಡಿ ವ್ಯವಸ್ಥೆಯಲ್ಲಿನ ಪಂಪ್-ಮೋಟಾರ್ಗಳ ಇಂಧನ ಕಾರ್ಯಕ್ಷಮತೆ ಯೋಜನೆಯ ಅನುಷ್ಠಾನ.

• ಇಂಧನ ಸಂರಕ್ಷಣೆ ಮತ್ತು ಕಟ್ಟಡ ಕೋಡ್ಗಳ ಮೇಲ್ವಿಚಾರಣೆ.

• ನಗರ ಸ್ಥಳೀಯ ಸಂಸ್ಥೆಗಳಲ್ಲಿ ಮಳೆ ನೀರು ಕೊಯ್ಲು ಅನುಷ್ಠಾನದ ಮೇಲ್ವಿಚಾರಣೆ.

• ನಿರ್ದೇಶಕರು, ಪೌರಾಡಳಿತ ನಿರ್ದೇಶನಾಲಯರವರು ವಹಿಸುವ ಇತರೆ ಕೆಲಸಗಳು.

ಮೂಲ : ಪೌರಾಡಳಿತ ನಿರ್ದೇಶನಾಲಯ , ಕರ್ನಾಟಕ ಸರ್ಕಾರ.